ಮ್ಯಾಥ್ ಸ್ಪೇಸ್‌ನ ಒಳಗೊಂದು ಪ್ರವಾಸ
ಸಂಖ್ಯಾಜ್ಞಾನ: ಎಣಿಕೆಯಿಂದ ಅಳತೆಯವರೆಗೆ


ಬೀಗದ ಕೈಗಳನ್ನು ವ್ಯವಸ್ಥಿತವಾಗಿ ಇಡಲು ಲ್ಯಾಪ್ಟಾಪ್ ಬಾಕ್ಸ್‌ಗಳ ಬಳಕೆ – ನಾವು ಇತ್ತೀಚೆಗೆ 40 ಬಾಕ್ಸ್‌ಗಳ ಆರ್ಡರ್ ಸ್ವೀಕರಿಸಿ, ಹಲವು ಸಾಧ್ಯತೆಗಳನ್ನು ಪರೀಕ್ಷಿಸಿ, ಒಂದು ಸುತ್ತಿನ ಹಿಮ್ಮಾಹಿತಿಯ ನಂತರ ವಿನ್ಯಾಸವನ್ನು ಅಂತಿಮಗೊಳಿಸಿ, 3 ದಿನಗಳಲ್ಲಿ ಎಲ್ಲಾ ಬಾಕ್ಸ್‌ಗಳನ್ನು ತಲುಪಿಸಿದೆವು!
ಲ್ಯಾಪ್‌ಟಾಪ್ ಬಾಕ್ಸ್ ಅನ್ನು ಕತ್ತರಿಸುವ ಮೂಲಕ ಅದರ ಲಾಕಿಂಗ್ ವ್ಯವಸ್ಥೆಯನ್ನು ಉಳಿಸುವ ಮೂಲ ಕಲ್ಪನೆಯು ಆಗ ತಾನೇ ನಮ್ಮ ಮ್ಯಾಥ್ ಸ್ಪೇಸ್ ತಂಡವನ್ನು ಸೇರಿದ್ದ BSc-BEd ಗಣಿತ ವಿದ್ಯಾರ್ಥಿಯದ್ದು ಎಂಬುದು ನಮಗೆ ಹೆಮ್ಮೆಯ ವಿಚಾರ.
ಆಕಾರಗಳು ಮತ್ತು ಆಕಾಶ


ಒಂದು ಮಾದರಿ, ಎಲ್ಲ ಸಂಭವನೀಯ ಚತುರ್ಭುಜಗಳು

ತ್ರಿಕೋನಕ್ಕೂ…ಇದು ಹಲವು ವರ್ಷಗಳ ನಂತರ ಬಂದಿತು!
ಕಾರ್ಯಾಗಾರ ಸರಣಿ





2015ರಿಂದ 2018ರವರೆಗೆ ಮ್ಯಾಥ್ ಸ್ಪೇಸ್ ಮೂರು ಸರಣಿಗಳಲ್ಲಿ ತಿಂಗಳಿಗೆ ಒಂದು ದಿನದ, ಪ್ರಾಥಮಿಕ (ತರಗತಿ 1 ರಿಂದ 5), ಹಿರಿಯ ಪ್ರಾಥಮಿಕ (ತರಗತಿ 6 ರಿಂದ 8) ಮತ್ತು ಪ್ರೌಢ (ತರಗತಿ 9 ಮತ್ತು 10) ಶಾಲಾ ಹಂತಗಳಿಗೆ ಸೂಕ್ತವಾದ ಕಾರ್ಯಾಗಾರಗಳನ್ನು ಆಯೋಜಿಸಿತು. ಈ ಕಾರ್ಯಾಗಾರದಲ್ಲಿ ಪ್ರತಿಯೊಂದು ಹಂತಕ್ಕೂ 7 ರಿಂದ 8 ಸೆಶನ್‌ಗಳು ಇದ್ದವು. ಸಾಮಾನ್ಯವಾಗಿ ಊಟದ ನಂತರ ಶಾಲೆಗೊಂದು ಕಿಟ್‌ನಂತೆ, ಸಲಕರಣೆಗಳನ್ನು ತಯಾರು ಮಾಡಲು ಸಮಯವನ್ನು ಮೀಸಲಾಗಿ ಇಡುತ್ತಿದ್ದೆವು. ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಸರಣಿಗಳಿಗೆ ಬೇಸಿಗೆ ರಜೆಯಲ್ಲಿ 3 ದಿನದ ಅನ್ವೇಷಣಾ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಹಲವು ರಾಜ್ಯಗಳ ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನಾ ಸಾಮಗ್ರಿಗಳನ್ನು ತಯಾರಿಸುವ ಕಾರ್ಯಾಗಾರವನ್ನು ನಡೆಸಿಕೊಡಲು ಮ್ಯಾಥ್ ಸ್ಪೇಸ್ ಅನ್ನು ಹಲವಾರು ಬಾರಿ ಆಮಂತ್ರಿಸಲಾಗಿದೆ.


CMD ಸಾಮಗ್ರಿಗಳು
















ಮಾಂಟೆಸೊರಿ ಸಾಮಗ್ರಿಗಳು:
ಇವುಗಳ ಬಗ್ಗೆ ಇನ್ನಷ್ಟು ತಿಳಿಯಲು, ಇದೇ ಸಂಚಿಕೆಯಲ್ಲಿರುವ ಲೇಖನವನ್ನು ಓದಿ.
ಮೊದಲು ತಯಾರಾದ ಗುಲಾಬಿ ಗೋಪುರ, ಕಂದು ಮೆಟ್ಟಿಲುಗಳು, ಉದ್ದವಾದ ರಾಡ್‌ಗಳು, ನಂಬರ್ ರಾಡ್‌ಗಳು ಮತ್ತು ಸಿಲಿಂಡರ್‌ಗಳೊಂದಿಗೆ ಅವನ್ನು ತಯಾರಿಸಿದ ವಿದ್ಯಾರ್ಥಿಗಳು.

ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳ ಕಲಿಕೆಗೆ ಸ್ಪರ್ಶಾತ್ಮಕ ಸಾಮಾಗ್ರಿಗಳು
- ಸ್ಪರ್ಶಾತ್ಮಕ ಬೀಜಗಣಿತ ಟೈಲ್‌ಗಳು
- ಸ್ಪರ್ಶಾತ್ಮಕ ಫ್ರ್ಯಾಕ್ಷನ್ ಗೋಡೆ
- ಸ್ಪರ್ಶಾತ್ಮಕ ಫ್ರ್ಯಾಕ್ಷನ್ ವೃತ್ತ ಮತ್ತು ಸೆಕ್ಟರ್
- ಬಾಟಲಿ ಮುಚ್ಚಳಗಳಿಂದ ತಯಾರಿಸಿದ ಸ್ಪರ್ಶಾತ್ಮಕ ಸಂಖ್ಯಾರೇಖೆ
- ಸ್ಪರ್ಶಾತ್ಮಕ ಕೋನಮಾಪಕ, ಪ್ರತಿ15 ಡಿಗ್ರಿ
- ಜಿಯೋಬೋರ್ಡ್ ಮೇಲೆ ಹಿಸ್ಟೋಗ್ರಾಮ್
ವೆಬ್‌ಸೈಟ್ : https://sites.google.com/apu.edu.in/mathspace/home

ಮ್ಯಾಥ್ ಸ್ಪೇಸ್ ವೆಬ್‌ಸೈಟ್ ಕೆಳಗಿನ ವಿಭಾಗಗಳನ್ನು ಹೊಂದಿದೆ:
- ಸಂಪನ್ಮೂಲಗಳು – ಪಠ್ಯಪುಸ್ತಕಗಳು, ವೆಬ್‌ಸೈಟ್‌ಗಳು, ದೃಶ್ಯಾಂಶಗಳು, ಕಡಿಮೆ ವೆಚ್ಚದ ಮಾಂಟೆಸರಿ ಸಂಪನ್ಮೂಲಗಳು, ವಿವಿಧ ಕಿಟ್‌ಗಳು ಇತ್ಯಾದಿ. ಇವುಗಳ ತಯಾರಿಕೆ (ಲೇಔಟ್‌ಗಳು ಸೇರಿದಂತೆ) ಮತ್ತು ಬಳಕೆಯ ಕುರಿತು ವಿವರಣೆಗಳು
- ಸಂಖ್ಯೆಗಳು ಮತ್ತು ಕ್ರಿಯೆಗಳು – ಪೂರ್ಣ ಸಂಖ್ಯೆಗಳು, ಭಿನ್ನರಾಶಿಗಳು, ದಶಮಾಂಶಗಳು, ಪೂರ್ಣಾಂಕಗಳು, ಭಾಗಲಬ್ಧ ಸಂಖ್ಯೆಗಳು, ಘಾತ ಮತ್ತು ಮೂಲಗಳು – ಇವನ್ನು ಅರ್ಥೈಸುವುದು ಮತ್ತು ಮೂಲತತ್ತ್ವಗಳಿಂದ ಹಂತ ಹಂತವಾಗಿ ನಿರ್ಮಿಸುವುದು ಇವುಗಳ ಮೇಲೆ ಒತ್ತು ನೀಡಲಾಗಿದೆ.
- ರೇಖಾಗಣಿತ ಮತ್ತು ಆಕಾರಗಳನ್ನು ಅರ್ಥಮಾಡಿಕೊಳ್ಳುವುದು – 2D ಮತ್ತು 3D ಆಕಾರಗಳು, ಸಮ್ಮಿತಿ, 3D ಇಂದ 2D ಗೆ ಬಿಂಬಿಸುವುದು (mapping), ವಿಶೇಷವಾಗಿ ಹಿರಿಯ ಪ್ರಾಥಮಿಕ ಹಂತಕ್ಕೆ ಬೇಕಾಗುವ ಹಲವು ಸಂಪನ್ಮೂಲಗಳು (ಅನಿಮೇಟೆಡ್ ಪವರ್‌ಪಾಯಿಂಟ್‌ಗಳು, ಕಾರ್ಯಹಾಳೆಗಳು ಇತ್ಯಾದಿ)
- ಅಳತೆ – ಉದ್ದ, ತೂಕ, ಸಾಮರ್ಥ್ಯ ಇತ್ಯಾದಿ – ಮತ್ತು ಮಾಪನ – 2D: ಸುತ್ತಳತೆ, ಮೇಲೈ ವಿಸ್ತೀರ್ಣ ಇತ್ಯಾದಿ ಮತ್ತು 3D: ಮೇಲೈ ವಿಸ್ತೀರ್ಣ, ಗಾತ್ರ, ಇತ್ಯಾದಿ., ಪೈಯನ್ನು (π) ಒಳಗೊಂಡ ಸೂತ್ರಗಳ ಅನ್ವೇಷಣೆ.
- ವಿನ್ಯಾಸಗಳು ಮತ್ತು ಬೀಜಗಣಿತ – ವಿನ್ಯಾಸಗಳು, ಉಕ್ತಿಗಳು, ಸಮೀಕರಣಗಳು, ನಿತ್ಯ ಸಮೀಕರಣಗಳು, ಅನುಪಾತ-ಪ್ರಮಾಣ ಮತ್ತು ಶೇಕಡ.
- ದತ್ತಾಂಶ (ಡೇಟಾ) ನಿರ್ವಹಣೆ, ಸಂಖ್ಯಾಶಾಸ್ತ್ರ– ಸರಾಸರಿ, ಮಧ್ಯಾಂಕ, ಮೋಡ್‌ಗಳ ಆಳವಾದ ಅಧ್ಯಯನ – ಮತ್ತು ಸಂಭಾವ್ಯತೆ – ಸ್ಪಿನ್ನರ್ಸ್, ಬೇಯ್ಸ್ ಪ್ರಮೇಯ, ಸ್ವತಂತ್ರತೆ.

ಕೆಲಸ ಬಹಳಷ್ಟು ಬಾಕಿಯಿದೆ. ಹಲವು ಸಂಪನ್ಮೂಲಗಳು ಮುಖ್ಯವಾಗಿ,
- ವಿವಿಧ ಮಾದರಿಗಳ ಮೂಲಕ ಭಿನ್ನರಾಶಿಗಳನ್ನು ಅನ್ವೇಷಿಸುವುದು,
- ಬೀಜಗಣಿತ ಟೈಲ್ಸ್ ಗಳ ಕಲ್ಪನೆಯನ್ನು ಬಳಸಿ ಸಮೀಕರಣಗಳನ್ನು ಬಿಡಿಸುವುದು,
- ಹಲವು ಚಿತ್ರಾಧಾರಿತ ಸಂಪನ್ಮೂಲಗಳು ಸರತಿಯಲ್ಲಿವೆ.
ವಿವಿಧ ಪರಿಕಲ್ಪನೆಗಳನ್ನು ಮತ್ತು ನಿರ್ಮಾಣಗಳನ್ನು ಪರಿಚಯಿಸಲು ವಿವರಣೆಗಳು, ಅನ್ವೇಷಣೆಗಳು, ಪೋಸ್ಟರ್‌ಗಳು ವಿಡಿಯೋಗಳು, ಕಾರ್ಯಹಾಳೆಗಳು ಮತ್ತು ಹಲವು ಅನಿಮೇಟೆಡ್ ಪಿಪಿಟಿಗಳು ಲಭ್ಯವಿವೆ. ಕೆಲವು ‘ಪೂಪ್ಸ್ ವಿತ್‌ಔಟ್ ವರ್ಡ್ಸ್’ಗಳು ಇದ್ದು, ಮತ್ತೂ ಕೆಲವನ್ನು ಸೇರಿಸಲಾಗುವುದು. ಮುಂದಿನ ದಿನಗಳಲ್ಲಿ ಆಟಗಳನ್ನು ಸೇರಿಸುವ ಆಶಯವೂ ಇದೆ.
- Khushboo Awasthi (2017, March). Drawing A Spiral of Square Roots, At Right Angles 6(1). 39-45. https://bit.ly/3Ui2Br6
- Swati Sircar, Sneha Titus (2018, March). Newer and Newer Spirals – Open and Shut Cases, At Right Angles 7(1). 66-71. https://bit.ly/4dUW5xh