ಅಟ್ ರೈಟ್ ಆಂಗಲ್ಸ್, ಭಾರತದಲ್ಲಿ ಬುನಾದಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳಲ್ಲಿ ಪಾಠ ಮಾಡುತ್ತಿರುವ ಶಾಲಾ ಶಿಕ್ಷಕರಿಗಾಗಿ ಇರುವ ಗಣಿತದ ಕುರಿತಾದ ಪತ್ರಿಕೆ.
ಅಟ್ ರೈಟ್ ಆಂಗಲ್ಸ್ ಶಾಲಾ ಶಿಕ್ಷಕರಿಗೆ ಉತ್ತಮ ಗುಣಮಟ್ಟದ ಗಣಿತ ಕಲಿಕಾ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದು ತರಗತಿಗಳಲ್ಲಿ ಮಾತ್ರವಲ್ಲದೆ ಶಾಲಾ ಪ್ರಕ್ರಿಯೆಯ ವಿಶಾಲ ಸಂದರ್ಭದಲ್ಲಿಯೂ, ಹೆಚ್ಚು ಅನುಭವಾತ್ಮಕ ಮತ್ತು ಅರ್ಥಗರ್ಭಿತ ಬೋಧನಾ-ಕಲಿಕಾ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ. ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಮತ್ತು ಉತ್ಸಾಹಭರಿತ ಬೋಧನೆಯನ್ನು ಸಂಭ್ರಮಿಸುವ ಸಲುವಾಗಿ, ಅಟ್ ರೈಟ್ ಆಂಗಲ್ಸ್ ಪತ್ರಿಕೆಯು ಭಾರತ ಮತ್ತು ಅದರ ವಿವಿಧ ಸಮುದಾಯಗಳಿಂದ ಹೊರಹೊಮ್ಮುವ ಪ್ರಾಯೋಗಿಕ ಒಳನೋಟಗಳ ಮೇಲೆ ಬೆಳಕು ಚೆಲ್ಲುತ್ತದೆ.
ಶಿಕ್ಷಕರು ಚೆನ್ನಾಗಿ ಪಾಠ ಮಾಡಿದರೆ, ವಿದ್ಯಾರ್ಥಿಗಳು ಚೆನ್ನಾಗಿ ಕಲಿಯುತ್ತಾರೆ. ಶಿಕ್ಷಕರು ಚೆನ್ನಾಗಿ ಪಾಠ ಮಾಡಲು ಅವರಿಗೆ ನೆರವಾಗಲು ನಾವು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE) 2023, ಇದರ ಗಣಿತ ವಿಭಾಗದಲ್ಲಿ ಚರ್ಚಿಸಿರುವ ಅಂಶಗಳನ್ನು ಆಧಾರವಾಗಿಟ್ಟುಕೊಂಡಿದ್ದೇವೆ. ಶಿಕ್ಷಕರ ಮತ್ತು ಶಾಲಾ ಪರಿಸರದ ಸ್ಥಳೀಯ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ಬೋಧನಾ ವಿಧಾನ ಮತ್ತು ತರಗತಿ ಪ್ರಕ್ರಿಯೆಗಳಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳಿಗೆ ಪರಿಹಾರಗಳನ್ನು ಸೂಚಿಸಲು ಪ್ರಯತ್ನಿಸುತ್ತೇವೆ.
ಸಂಪಾದಕರ ಕಛೇರಿ
ಪ್ರಕಾಶನ,ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ
publications@apu.edu.in www.azimpremjiuniversity.edu.in