ಅವಲೋಕನ
ಅವಲೋಕನ ವಿಭಾಗದಲ್ಲಿ ಗಣಿತ ಸಂಬಂಧಿತ ಶೈಕ್ಷಣಿಕ ಸಂಪನ್ಮೂಲಗಳ ಕುರಿತಾದ ವಿಭಿನ್ನ ಒಳನೋಟಗಳು ದೊರೆಯುತ್ತವೆ. ನಾವಿಲ್ಲಿ ಬಗೆಬಗೆಯ ಸಂಪನ್ಮೂಲಗಳನ್ನು, – ಅಂದರೆ ಪಠ್ಯಪುಸ್ತಕಗಳು, ಗಣಿತ ಮತ್ತು ಗಣಿತ ಶಿಕ್ಷಣಕ್ಕೆ ಸಂಬಂಧಿಸಿದ ಕೃತಿಗಳು, ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ಸಾಮಗ್ರಿಗಳು, ಉತ್ತಮ ವೆಬ್ ಸೈಟುಗಳು, ಶೈಕ್ಷಣಿಕ ಆಟಗಳು ಮತ್ತು ತಂತ್ರಾಂಶಗಳು -ಪರಿಶೀಲಿಸುತ್ತೇವೆ. ನುರಿತ ಶಿಕ್ಷಕರು ಮತ್ತು ವಿಷಯ ಪರಿಣತರು ಮಾತ್ರವಲ್ಲದೆ ಕ್ಷೇತ್ರಕಾರ್ಯದಲ್ಲಿ ತೊಡಗಿಕೊಂಡಿರುವವರು ಹಾಗೂ ಎಲ್ಲ ಬಗೆಯ ಆಸಕ್ತರು ಬರೆದ ಮೌಲ್ಯಾಂಕನ ಲೇಖನಗಳೂ ಈ ವಿಭಾಗದಲ್ಲಿ ನಿಮಗೆ ದೊರೆಯುತ್ತವೆ. ಹೀಗೆ ಎಲ್ಲರನ್ನೂ ಒಳಗೊಳ್ಳುವುದರಿಂದ ವಿಭಿನ್ನ ಮತ್ತು ಸಮೃದ್ಧ ನಿಲುಮೆಗಳು ಒಂದೇ ಕಡೆ ದೊರೆತು ಸೂಕ್ತ ಶೈಕ್ಷಣಿಕ ಸಾಮಗ್ರಿಗಳನ್ನು ಆರಿಸಲು ಬೇಕಿರುವ ಸಮಗ್ರ ಹಾಗೂ ಲಭ್ಯ ಪರಾಮರ್ಶೆಗಳು ನಮ್ಮ ಪತ್ರಿಕೆಯ ಓದುಗರಿಗೆ ಸಿಗುತ್ತವೆ.