ನಾರಾಯಣ ಮೆಹರ್ ಅವರು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಶಿಕ್ಷಕ ಶಿಕ್ಷಣ ಅಧ್ಯಾಪಕ ವೃಂದದ ಸದಸ್ಯರಾಗಿದ್ದಾರೆ. ಇದಕ್ಕೆ ಮೊದಲು, ಅವರು ದೆಹಲಿಯ ಮಿರಾಂಬಿಕಾ ಫ್ರೀ ಪ್ರೋಗ್ರೆಸ್ ಶಾಲೆ ಮತ್ತು ಗುರಗಾಂವ್‌ನ ಹೆರಿಟೇಜ್ ಎಕ್ಸ್‌ಪಿರಿಯೆನ್ಷಿಯಲ್ ಲರ್ನಿಂಗ್ ಸ್ಕೂಲ್‌ನಲ್ಲಿ (HXLS) ಗಣಿತವನ್ನು ಕಲಿಸಿದ್ದಾರೆ. HXLS ನಲ್ಲಿ ಕೆಲಸ ಮಾಡುವಾಗ, ಅವರು ಜೋಡೋ ಗ್ಯಾನ್ ಎಂಬ ದೆಹಲಿ ಮೂಲದ ಲಾಭರಹಿತ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದಾರೆ. ಈ ಸಂಸ್ಥೆಯು ಗಣಿತವನ್ನು ಕಲಿಸುವ ನವೀನ ವಿಧಾನಗಳನ್ನು ಅನ್ವೇಷಿಸುತ್ತದೆ. ಅವರು ಗುರಗಾಂವ್‌ನ IAAT (ಐ ಆ್ಯಮ್ ಅ ಟೀಚರ್) ಸಂಸ್ಥೆಯಲ್ಲಿ ಶಿಕ್ಷಕರಾಗಿಯೂ ಮತ್ತು ಶಿಕ್ಷಕ ತರಬೇತಿದಾರರಾಗಿಯೂ ಕೆಲಸ ಮಾಡಿದ್ದಾರೆ. ಗಣಿತ ಶಿಕ್ಷಣ ಅವರ ಆಸಕ್ತಿಯ ಕ್ಷೇತ್ರ. ಜೊತೆಗೆ, ಸ್ಥಾನಿಕ ಚಿಂತನೆ (spatial thinking) ಮತ್ತು ವಿವೇಚನೆಯನ್ನು ಬೇಡುವ ಪ್ರಾಯೋಗಿಕ ಕಲೆ ಮತ್ತು ಕರಕುಶಲ ಕೆಲಸಗಳಲ್ಲಿ ತೊಡಗಿಕೊಳ್ಳುವುದರಲ್ಲೂ ಅವರಿಗೆ ಆಸಕ್ತಿ ಇದೆ.