ಸಂದೀಪ್ ದಿವಾಕರ್ 2012ರಿಂದ ಮಧ್ಯಪ್ರದೇಶದ ಭೋಪಾಲಿನ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರೌಢ ಶಾಲೆಯಲ್ಲಿ ಗಣಿತ ಪಾಠ ಮಾಡಿದ ಅನುಭವ ಹೊಂದಿರುವ ಇರುವ ಇವರು, ಭೋಪಾಲಿನ ರಾಜ್ಯ ಶಿಕ್ಷಣ ಕೇಂದ್ರದಲ್ಲಿ (ಎಸ್‌ಸಿಇಆರ್‌ಟಿ) ಉಪನ್ಯಾಸಕರಾಗಿ 15 ವರ್ಷಗಳ ಕೆಲಸ ಮಾಡಿದ್ದಾರೆ. ಸಂದೀಪ್ ಅವರು ರಾಜ್ಯ ಪಠ್ಯಕ್ರಮ ಚೌಕಟ್ಟು, ಪಠ್ಯಪುಸ್ತಕಗಳು, ತರಬೇತಿ ಮಾಡ್ಯೂಲ್‌ಗಳು ಮತ್ತು ಶಿಕ್ಷಕರು, ಶಿಕ್ಷಕ ಶಿಕ್ಷಕರು ಮತ್ತು ಮಕ್ಕಳಿಗೆ ಅಗತ್ಯವಾದ ಬೋಧನಾ ಕಲಿಕಾ ಸಾಮಗ್ರಿಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಲೇಖನಗಳು ಶೈಕ್ಷಿಕ್ ಪಲಾಶ್, ಪ್ರಾಥಮಿಕ್ ಶಿಕ್ಷಕ್, ಶೈಕ್ಷಿಕ್ ಸಂಧರ್ಭ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.