ಅರ್ಧೇಂದು ಶೇಖರ್ ದಾಶ್

arddhendu@azimpremjifoundation.org
ಅರ್ಧೇಂದು ಶೇಖರ್ ದಾಶ್

ಅರ್ಧೇಂದು ಶೇಖರ್ ದಾಶ್ ಛತ್ತೀಸ್‌ಗಢದ ಧಮ್ತರಿಯಲ್ಲಿರುವ ಅಜೀಂ ಪ್ರೇಮ್‌ಜಿ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಈ ಮೊದಲು ಅವರು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದರು. ಅವರು ಭುವನೇಶ್ವರದ ವಾಣಿ ವಿಹಾರದ ಉತ್ಕಲ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎಸ್‌ಸಿ ಪಡೆದಿದ್ದಾರೆ. ಅವರು ಗಣಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಶಿಕ್ಷಕರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಗಣಿತದ ಪರಿಕಲ್ಪನಾತ್ಮಕ ಗ್ರಹಿಕೆ ಮತ್ತು ಗಣಿತ ತರಗತಿಯಲ್ಲಿ ಬಳಸಬಹುದಾದ ಬೋಧನಾ ತಂತ್ರಗಳ ಕುರಿತು ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಮಕ್ಕಳೊಂದಿಗೆ ಗಣಿತ ಮಾಡುತ್ತಿರುವ ಇವರು, ತಂತ್ರಜ್ಞಾನ ಸಂಪನ್ಮೂಲಗಳ ವಿನ್ಯಾಸ ಮತ್ತು ಅನ್ವೇಷಣೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅಲ್ಲದೆ, ದೂರ ಮತ್ತು ಮುಕ್ತ ಶಿಕ್ಷಣಕ್ಕೆ ಪಠ್ಯಕ್ರಮ ರೂಪಿಸುವ ಹಾಗೂ ಛತ್ತೀಸ್‌ಗಢದ ಪಠ್ಯಪುಸ್ತಕಗಳನ್ನು ಬರೆಯುವ ಪ್ರಕ್ರಿಯೆಯಲ್ಲೂ ತೊಡಗಿಕೊಂಡಿದ್ದಾರೆ.