ರೀಮಾ ಕೌರ್ ಅವರು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಟಿನ್ಯೂಯಿಂಗ್ ಎಜುಕೇಶನ್ ಅಂಡ್ ಯೂನಿವರ್ಸಿಟಿ ರಿಸೋರ್ಸ್ ಸೆಂಟರ್ (SCE-URC) ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರು ದೆಹಲಿಯ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದಿಂದ B.Ed. ಪದವಿಯನ್ನು ಮತ್ತು ದೆಹಲಿಯ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಯೂನಿವರ್ಸಿಟಿಯಲ್ಲಿ ಶಿಕ್ಷಣದಲ್ಲಿ M.A. ಪದವಿಯನ್ನು ಪಡೆದಿದ್ದಾರೆ. ಆರಂಭಿಕ ಭಾಷೆ ಮತ್ತು ಸಾಕ್ಷರತೆ (Early Language and Literacy) ಮತ್ತು ಆರಂಭಿಕ ಬಾಲ್ಯ ಶಿಕ್ಷಣ (Early Childhood Education) ಅವರ ಆಸಕ್ತಿಯ ಕ್ಷೇತ್ರಗಳಾಗಿವೆ. ರೀಮಾ ಅವರು ಶಾಲೆಯ ದಿನಗಳಲ್ಲಿ ಗಣಿತವೆಂದರೆ ಹೆದರುತ್ತಿದ್ದರೆಂದು ಮತ್ತು ಇಂದು ಅವರೇ ಗಣಿತ ನಿಯತಕಾಲಿಕೆಗೆ ಲೇಖನ ಬರೆದಿದ್ದಾರೆ ಎಂಬುದನ್ನು ನಂಬಲಾಗುತ್ತಿಲ್ಲವೆಂದು ಹೇಳುತ್ತಾರೆ.