ರಾಜಕುಮಾರ್ ಕನೋಜಿಯಾ

rajkumar.kanojiya7@outlook.com
ರಾಜಕುಮಾರ್ ಕನೋಜಿಯಾ

ರಾಜಕುಮಾರ್ ಕನೋಜಿಯಾ ಅವರು ಶಿಕ್ಷಣದಲ್ಲಿ ಸ್ನಾತಕ ಪೂರ್ವ ಮತ್ತು ಗಣಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ಶಾಲಾ ನಾಯಕತ್ವ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಿದ್ದಾರೆ ಮತ್ತು ಬೋಧನೆಯ ಕುರಿತಾದ ಹಲವಾರು ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಶಿಕ್ಷಕರಾಗಿ 14 ವರ್ಷಗಳ ಅನುಭವ ಹೊಂದಿದ್ದು, ಈಗ ಮಹಾರಾಷ್ಟ್ರದ CBSE ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಗಣಿತದ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಮತ್ತು ಕಲೆಗಳನ್ನು ಸಂಯೋಜಿಸುವುದೆಂದರೆ ಅವರಿಗೆ ಬಹಳ ಇಷ್ಟ. ಅವರ ಪ್ರಕಾರ, ಗಣಿತವೆಂಬುದು ಕೇವಲ ಒಂದು ವಿಷಯವಲ್ಲ, ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ಒಂದು ಭಾಷೆ.