ಆರುಣಿ ಜೋಸೆಫ್ ಅವರು ತಮ್ಮ ವೃತ್ತಿಜೀವನವನ್ನು ಐಟಿ ಕ್ಷೇತ್ರದಲ್ಲಿ ಪ್ರಾರಂಭಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಿದ ನಂತರ, ಅವರು ಮನೆ ಪಾಠ ಮಾಡುವ ಮೂಲಕ ತಮ್ಮ ಆಸಕ್ತಿಯ ವಿಷಯವಾದ ಗಣಿತದ ಬೋಧನೆಯನ್ನು ಆರಂಭಿಸಿದರು. ಅವರು 2023ರಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಶಿಕ್ಷಣದಲ್ಲಿ M.A. ಪದವಿ ಪಡೆದಿದ್ದಾರೆ. ನಂತರ ಅವರು ಬೆಂಗಳೂರಿನ ಗುಬ್ಬಚ್ಚಿ ಲರ್ನಿಂಗ್ ಕಮ್ಯುನಿಟಿಯೊಂದಿಗೆ ಸೇರಿ ಶಾಲೆಯಿಂದ ಹೊರಗುಳಿದ ಕಾರ್ಮಿಕರ ಮಕ್ಕಳಿಗೆ ಗಣಿತವನ್ನು ಬೋಧಿಸಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ಪ್ರಕ್ರಿಯಾ ಗ್ರೀನ್ ವಿಸ್ಡಮ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.