ಪ್ರೊಫೆಸರ್ ವಿಜಯ್ ಎ. ಸಿಂಗ್ ಅವರು ಕಾನ್ಪುರದ ಐಐಟಿಯಲ್ಲಿ (1984-2014) ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ (2005-2015) ಅಧ್ಯಾಪಕ ವೃಂದದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಅವರು ವಿಜ್ಞಾನ ಒಲಿಂಪಿಯಾಡ್‌ಗಳು ಮತ್ತು ನ್ಯಾಷನಲ್ ಇನಿಶಿಯೇಟಿವ್ ಆನ್ ಅಂಡರ್‌ಗ್ರಾಜುಯೇಟ್ ಸೈನ್ಸ್ (ಎನ್ಐಯುಎಸ್) ಕಾರ್ಯಕ್ರಮಗಳ ರಾಷ್ಟ್ರೀಯ ಸಂಯೋಜಕರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ಅವರು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಇಂಡಿಯಾ, ಇದರ ಫೆಲೋ ಆಗಿದ್ದು, ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಕ್ಸ್ ಟೀಚರ್ಸ್ (2019-21) ಅಧ್ಯಕ್ಷರಾಗಿದ್ದರು. ಪ್ರಸ್ತುತ ಅವರು ಸೆಂಟರ್ ಆಫ್ ಎಕ್ಸೆಲೆನ್ಸ್, ಮುಂಬೈನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.